
13th August 2025
ಜಿ.ಎಂ.ವಿಶ್ವವಿದ್ಯಾಲಯದಲ್ಲಿ ಸ್ಟಾರ್ಟ್ಆಪ್ ಕಾರ್ಯಾಗಾರ
ದಾವಣಗೆರೆ : ಪ್ರಸ್ತುತ ಹೊಸತನಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದು, ನವೀನ ಬುದ್ಧಿ ಶಕ್ತಿ, ಚಿಂತನೆಯುಳ್ಳವರಿಗೆ ಸುವರ್ಣಾವಕಾಶವಿದೆ ಎಂದು ಜಿ.ಎಂ. ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ ಮತ್ತು ರಿಸರ್ಚ್ ನ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ ತಿಳಿಸಿದರು.
ಜಿ.ಎಂ. ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ & ರಿಸರ್ಚ್ (GMIPSR), ಸಂಸ್ಥೆಯ ಇನೋವೇಶನ್ ಕೌನ್ಸಿಲ್ (ಆವಿಷ್ಕಾರ ಮಂಡಳಿ)ಯ ಸಹಯೋಗದಲ್ಲಿ ಜಿಎಂ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ಆಗಸ್ಟ್ 13,2025 ರಂದು ಆಯೋಜಿಸಲಾಗಿದ್ದ ‘ಸ್ಟಾರ್ಟ್ಅಪ್ಗಳಿಗೆ ಬೌದ್ಧಿಕ ಸರ್ವಸ್ವ ಹಕ್ಕುಗಳ ರಕ್ಷಣಾ ಮತ್ತು ಐಪಿಒ ನಿರ್ವಹಣೆ’ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುಗದಲ್ಲಿ ಸಾಧನೆ ಯಾವುದೂ ಅಸಾಧ್ಯವಾದುದ್ದಿಲ್ಲ. ಸಾಧಿಸುವುದು ನಿಮ್ಮ ಜ್ಞಾನ, ಅನುಭವ ಮತ್ತು ಕನಸ್ಸಿನ ಮೇಲಿದೆ. ಪ್ರತಿ ದಿನ ಜ್ಞಾನ ಮತ್ತು ಅನುಭವ ಹೆಚ್ಚು ಬೆಳೆಸಿಕೊಂಡು ಪ್ರಸ್ತುತಪಡಿಸಬೇಕು. ಜೊತೆಗೆ ಅಂತೆಯೇ ಕನಸು ದೊಡ್ಡದಾಗಿರಬೇಕು, ಈಗಿನ ಯುಗಕ್ಕೆ ಪೂರಕವಾದ ಆಲೋಚನೆ, ಚಿಂತನೆಗಳು ವಿಶೇಷವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರತಿ ವೈಫಲ್ಯ ಯಶಸ್ಸಿಗೆ ಅನುಭವವಾಗಲಿದೆ. ಹಾಗಾಗಿ ಹೊಸದಾದ ಸಕಾರಾತ್ಮಕ ಚಿಂತನೆ, ಆಲೋಚನೆಗಳ ಮೂಲಕ ನಿಮ್ಮ ಕ್ಷೇತ್ರದ ಜೊತೆಗೆ ಸಾಮಾಜಿಕ ಕ್ಷೇತ್ರಕ್ಕೆ ಸಕಾರಾತ್ಮಕ ಕೊಡುಗೆ ನೀಡಲು ಮುಂದಾಗಿ. ಮನಸ್ಸು, ವಿಭಿನ್ನ ಮಾರ್ಗ, ಹೊಸ ವಿಚಾರವನ್ನು ಚರ್ಚಿಸಿ. ನವೋದ್ಯಮಗಳಿಗೆ ಸರ್ಕಾರ ಬೆಂಬಲ ನೀಡುತ್ತದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಲು ಹೊಸ ಕಲ್ಪನೆ, ನವೀನ ಚಿಂತನೆಗೆ ಮುಂದಾಗುವಂತೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಎಂ. ವಿಶ್ವವಿದ್ಯಾಲಯದ ಸಂಯುಕ್ತ ಸಂಶೋಧನಾ ಡೀನ್ ಡಾ. ಸ್ವರೂಪ್ ಕೆ ಅವರು, ಬೌದ್ಧಿಕ ಸರ್ವಸ್ವ ಹಕ್ಕುಗಳ ಮಹತ್ವ ಮತ್ತು ಪೇಟೆಂಟ್, ಟ್ರೇಡ್ಮಾರ್ಕ್, ಕಾಪಿರೈಟ್ ಮುಂತಾದ ಹಕ್ಕುಗಳ ಅಧ್ಯಯನ ಮತ್ತು ನಿರ್ವಹಣೆಯ ತಂತ್ರಗಳನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಯುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ವೇಳೆ ಔಷಧ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಯುಸುಫ್ ಮಲಿಕ್ ಡಿ ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ಉಪಪ್ರಾಚಾರ್ಯರು ಮತ್ತು ಔಷಧ ತಯಾರಿಕೆ (Pharmaceutics) ವಿಭಾಗದ ಮುಖ್ಯಸ್ಥರು ಡಾ. ಜೆ. ತಿಮ್ಮಶೆಟ್ಟಿ ಹಾಗೂ ಔಷಧ ಜ್ಞಾನ (Pharmacognosy) ವಿಭಾಗದ ಮುಖ್ಯಸ್ಥರು ಡಾ. ಅಮಿತ್ ಕುಮಾರ್ ಬಿ. ಸಹ ಹಾಜರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಪ್ರತೀಕ್ಷಾ ಸಿ ವಂದಿಸಿದರು.
ಬೆಳಗಾವಿ ದರ್ಪಣ ರೋಟರಿ ಕ್ಲಬ್ – “ಜೀವನ ಆರಿಸಿ, ವ್ಯಸನ ಬಿಡಿ” ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ